ಸತ್ಯ ನಾಡೆಲ್ಲಾ
CEO
Microsoft ನಲ್ಲಿ, ನಮ್ಮ ಗುರಿಯು ಪ್ರಪಂಚದಲ್ಲಿರುವ ಪ್ರತಿ ವ್ಯಕ್ತಿ ಮತ್ತು ಪ್ರತಿ ಸಂಸ್ಥೆಗೂ ಮತ್ತಷ್ಟನ್ನು ಸಾಧಿಸುವಂತೆ ಸಮರ್ಥಗೊಳಿಸುವುದಾಗಿದೆ. ಇದನ್ನು ನಾವು ಚತುರ ಕ್ಲೌಡ್ ನಿರ್ಮಾಣ ಮಾಡುವ, ಉತ್ಪಾದಕೀಯತೆ ಮತ್ತು ವ್ಯವಹಾರ ಪ್ರಕ್ರಿಯೆಗಳನ್ನು ಮರುಸಂಶೋಧನೆ ಮಾಡುವ ಮೂಲಕ ಮತ್ತು ಕಂಪ್ಯೂಟಿಂಗ್ ಅನ್ನು ಹೆಚ್ಚು ವೈಯಕ್ತಿಕಗೊಳಿಸುವ ಮೂಲಕ ಮಾಡುತ್ತೇವೆ. ಇವೆಲ್ಲವುಗಳಲ್ಲಿ, ನಾವು ಗೌಪ್ಯತೆಯ ಕಾಲಾತೀತ ಮೌಲ್ಯವನ್ನು ಕಾಪಾಡುತ್ತೇವೆ ಮತ್ತು ನಿಮ್ಮ ಡೇಟಾ ನಿಯಂತ್ರಿಸುವ ಸಾಮರ್ಥ್ಯವನ್ನು ಸಂರಕ್ಷಿಸುತ್ತೇವೆ.
ಡೇಟಾವನ್ನು ಹೇಗೆ ಮತ್ತು ಏಕೆ ಸಂಗ್ರಹಿಸಲಾಗುತ್ತಿದೆ ಮತ್ತು ಬಳಸಲಾಗುತ್ತಿದೆ ಎಂಬ ಕುರಿತಾಗಿ ನೀವು ಅರ್ಥಪೂರ್ಣ ಆಯ್ಕೆಗಳನ್ನು ಪಡೆಯುತ್ತೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಜೊತೆಗೆ ಮತ್ತು ನಮ್ಮ ಉತ್ಪನ್ನಗಳು ಮತ್ತು ಸೇವೆಗಳಾದ್ಯಂತ ನಿಮಗೆ ಸೂಕ್ತವಾಗಿರುವ ಆಯ್ಕೆಗಳನ್ನು ಮಾಡಲು ನಿಮಗೆ ಅಗತ್ಯವಾಗಿರುವ ಮಾಹಿತಿಯನ್ನು ನೀವು ಹೊಂದಿದ್ದೀರೆಂದು ಖಾತ್ರಿಪಡಿಸಿಕೊಳ್ಳುವ ಮೂಲಕ ಇದು ಪ್ರಾರಂಭಗೊಳ್ಳುತ್ತದೆ.
ಆರು ಗೌಪ್ಯತೆಯ ತತ್ವಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಪ್ರತಿದಿನ ನಿಮ್ಮ ನಂಬಿಕೆಯನ್ನು ಸಂಪಾದಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ:
ಈ ತತ್ವಗಳು ಗೌಪ್ಯತೆಯ ಕುರಿತಾಗಿ Microsoft ನ ಕಾರ್ಯನೀತಿಯ ಅಡಿಗಟ್ಟನ್ನು ರೂಪಿಸುತ್ತವೆ ಮತ್ತು ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ನಾವು ನಿರ್ಮಿಸುವ ರೀತಿಗೆ ಆಕಾರ ನೀಡುವುದನ್ನು ಮುಂದುವರಿಸುತ್ತದೆ. ಎಂಟರ್ಪ್ರೈಸ್ ಮತ್ತು ವ್ಯವಹಾರ ಗ್ರಾಹಕರಿಗೆ, ನಾವು Microsoft ಕ್ಲೌಡ್ ನಲ್ಲಿ ನಿಮ್ಮ ಡೇಟಾವನ್ನು ಹೇಗೆ ರಕ್ಷಿಸುತ್ತೇವೆ ಎಂಬುದನ್ನು ಪರಿಶೀಲಿಸಲು Microsoft ವಿಶ್ವಾಸನೀಯ ಕೇಂದ್ರ ಪರಿಶೀಲಿಸಿ.
ಈ ವೆಬ್ಸೈಟ್ನ ಉಳಿದ ಭಾಗದಲ್ಲಿ, ನೀವು ಮತ್ತಷ್ಟು ಮಾಹಿತಿ ಮತ್ತು ನಿಯಂತ್ರಣಗಳಿಗೆ ಲಿಂಕ್ಗಳನ್ನು ಕಂಡುಕೊಳ್ಳುತ್ತೀರಿ, ಇದರಿಂದ ನಿಮಗಾಗಿ ಸೂಕ್ತ ನಿರ್ಧಾರಗಳನ್ನು ನೀವು ಮಾಡಬಹುದು. ಮತ್ತು ನಾವು ನಿರಂತರವಾಗಿ ಸುಧಾರಿಸಲು ಕಾರ್ಯನಿರ್ವಹಿಸುತ್ತಿದ್ದೇವೆ, ಆದ್ದರಿಂದ ಗೌಪ್ಯತೆಗೆ ಸಂಬಂಧಿಸಿದಂತೆ ನೀವು ನಿರೀಕ್ಷಿಸುವ ರೀತಿಯಲ್ಲಿ ನಮ್ಮ ಉತ್ಪನ್ನಗಳು ಮತ್ತು ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕುರಿತಾಗಿ ಏನನ್ನಾದರೂ ನೀವು ಗಮನಿಸಿದರೆ, ದಯವಿಟ್ಟು ನಮಗೆ ತಿಳಿಸಿ.
ನಿಮಗೆ ಮತ್ತಷ್ಟನ್ನು ಮಾಡಲು ಸಹಾಯ ಮಾಡುವುದಕ್ಕಾಗಿ ಡೇಟಾವನ್ನು Microsoft ಸಂಗ್ರಹಿಸುತ್ತದೆ. ಇದನ್ನು ಮಾಡಲು, ನಾವು ಸಂಗ್ರಹಿಸುವ ಡೇಟಾವನ್ನು ನಾವು ನಮ್ಮ ಸಾಫ್ಟ್ವೇರ್, ಸೇವೆಗಳು ಮತ್ತು ಸಾಧನಗಳನ್ನು ಕಾರ್ಯಾಚರಿಸಲು ಮತ್ತು ಸುಧಾರಿಸಲು, ನಿಮಗೆ ವೈಯಕ್ತೀಕರಿಸಿದ ಅನುಭವಗಳನ್ನು ಒದಗಿಸಲು ಮತ್ತು ನಿಮ್ಮನ್ನು ಸುರಕ್ಷಿತವಾಗಿರಿಸುವುದಕ್ಕಾಗಿ ಸಹಾಯ ಮಾಡಲು ಬಳಸುತ್ತೇವೆ. ಇವುಗಳು ನಾವು ಸಂಗ್ರಹಿಸುವ ಡೇಟಾದ ಹೆಚ್ಚು ಸಾಮಾನ್ಯವಾದ ವರ್ಗಗಳಾಗಿವೆ.

ಹಲವು ಶೋಧನಾ ಇಂಜಿನ್ಗಳಂತೆಯೇ, ನಿಮ್ಮ ಶೋಧ ಇತಿಹಾಸವನ್ನು ಮತ್ತು ಇತರ ಜನರಿಂದ ಕ್ರೋಢೀಕರಿಸಿದ ಇತಿಹಾಸವನ್ನು ನಿಮಗೆ ಉತ್ತಮ ಶೋಧ ಫಲಿತಾಂಶಗಳನ್ನು ನೀಡುವುದಕ್ಕಾಗಿ ನಾವು ಬಳಸುತ್ತೇವೆ. ವೆಬ್ ಬ್ರೌಸಿಂಗ್ ಅನ್ನು ವೇಗಗೊಳಿಸಲು, ನೀವು ಎಲ್ಲಿ ಹೋಗಲು ಬಯಸುತ್ತೀರೆಂದು ಊಹೆ ಮಾಡಲು Microsoft ವೆಬ್ ಬ್ರೌಸರ್ಗಳು ಬ್ರೌಸಿಂಗ್ ಇತಿಹಾಸವನ್ನು ಸಂಗ್ರಹಿಸಬಹುದು ಮತ್ತು ಬಳಸಬಹುದು. ನಿಮ್ಮ ಬ್ರೌಸಿಂಗ್ ಮತ್ತು ಶೋಧ ಇತಿಹಾಸವನ್ನು ಆಧರಿಸಿ ವೈಯಕ್ತೀಕರಿಸಿದ ಶಿಫಾರಸುಗಳನ್ನು Cortana ಮಾಡಬಹುದು.
ನಿಮ್ಮ Windows ಗೌಪ್ಯತೆ ಸೆಟ್ಟಿಂಗ್ನಲ್ಲಿ ಪ್ರತಿಕ್ರಿಯೆ ಮತ್ತು ತಪಾಸಣೆ ಸೆಟ್ಟಿಂಗ್ ಮೂಲಕ ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಸಂಗ್ರಹಿಸಲಾಗಿದೆಯೇ ಎಂಬುದನ್ನು ನೀವು ಆರಿಸಬಹುದು. Cortana ಮತ್ತು Microsoft Edge ಸೆಟ್ಟಿಂಗ್ಗಳಲ್ಲಿ ನಿಮ್ಮ ಶೋಧ ಮತ್ತು ಬ್ರೌಸಿಂಗ್ ಇತಿಹಾಸಕ್ಕೆ Cortana ಪ್ರವೇಶವನ್ನು ಹೊಂದಿದೆಯೇ ಎಂಬುದನ್ನೂ ಸಹ ನೀವು ನಿರ್ವಹಣೆ ಮಾಡಬಹುದು.

ಸ್ಥಳ ಮಾಹಿತಿಯು ನೀವು ಹೋಗಲು ಬಯಸುವ ಸ್ಥಳಗಳಿಗೆ ದಿಕ್ಕುಗಳನ್ನು ನೀಡಲು ಸಹಾಯ ಮಾಡುತ್ತದೆ ಮತ್ತು ನೀವು ಇರುವ ಸ್ಥಳಕ್ಕೆ ಪ್ರಸ್ತುತವೆನಿಸುವ ಮಾಹಿತಿಯನ್ನು ತೋರಿಸುತ್ತದೆ. ಇದಕ್ಕಾಗಿ, ನೀವು ಒದಗಿಸುವ ಅಥವಾ GPS ಅಥವಾ IP ವಿಳಾಸಗಳಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು ನಾವು ಪತ್ತೆಹಚ್ಚಿರುವ ಸ್ಥಾನಗಳನ್ನು ನಾವು ಬಳಸುತ್ತೇವೆ.
ಸ್ಥಾನವನ್ನು ಪತ್ತೆಹಚ್ಚುವುದು ನಿಮ್ಮನ್ನು ರಕ್ಷಿಸಲೂ ಸಹ ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ಬಹುಪಾಲು ಯಾವಾಗಲೂ ಟೋಕಿಯೋದಿಂದ ಸೈನ್ ಇನ್ ಮಾಡಿದರೆ ಮತ್ತು ಹಠಾತ್ ಆಗಿ ನೀವು ಲಂಡನ್ನಿಂದ ಸೈನ್ ಇನ್ ಮಾಡುತ್ತಿದ್ದರೆ, ಅದು ನೀವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಪರಿಶೀಲಿಸಬಹುದು.
ಸ್ಥಳ ಸೇವೆಗಳು ನೀವು ಸೆಟ್ಟಿಂಗ್ಗಳು > ಗೌಪ್ಯತೆ > ಸ್ಥಾನ ಇಲ್ಲಿ ಆನ್ ಅಥವಾ ಆಫ್ ಮಾಡಬಹುದು. ಇಲ್ಲಿಂದ, ನೀವು ಯಾವ Microsoft Store ಅಪ್ಲಿಗಳು ನಿಮ್ಮ ಸ್ಥಾನಕ್ಕೆ ಪ್ರವೇಶ ಹೊಂದಿವೆ ಎಂಬುದನ್ನು ಸಹ ಆರಿಸಿಕೊಳ್ಳಬಹುದು ಮತ್ತು ನಿಮ್ಮ ಸಾಧನದಲ್ಲಿ ಸಂಗ್ರಹಿಸಿರುವ ಸ್ಥಾನ ಇತಿಹಾಸವನ್ನು ನಿರ್ವಹಣೆ ಮಾಡಬಹುದು.
ನಿಮ್ಮ Microsoft ಖಾತೆಯ ಜೊತೆಗೆ ಸಂಯೋಜಿತವಾಗಿರುವ ಡೇಟಾವನ್ನು ವೀಕ್ಷಿಸಲು ಮತ್ತು ತೆರವುಗೊಳಿಸಲು, account.microsoft.com ಗೆ ಹೋಗಿ.

ನಿಮಗೆ ಟ್ರಾಫಿಕ್ ಅನ್ನು ತಪ್ಪಿಸಲು, ವಾರ್ಷಿಕೋತ್ಸವಗಳನ್ನು ನೆನಪಿಡಲು, ನಿಮ್ಮ ಒಪ್ಪಂದ ಪಟ್ಟಿಯಲ್ಲಿ ಸೂಕ್ತ "ಜೆನ್ನಿಫರ್"ಗೆ ಪಠ್ಯ ಸಂದೇಶ ಕಳುಹಿಸಲು ಮತ್ತು ಸಾಮಾನ್ಯವಾಗಿ ಹೆಚ್ಚಿನದನ್ನು ಮಾಡಲು ಸಹಾಯ ಮಾಡುವುದಕ್ಕಾಗಿ, ನಿಮಗೆ ಯಾವುದರಲ್ಲಿ ಆಸಕ್ತಿ ಇದೆ, ನಿಮ್ಮ ಕ್ಯಾಲೆಂಡರ್ನಲ್ಲಿ ಏನಿದೆ ಮತ್ತು ಯಾರೊಂದಿಗೆ ನೀವು ಕಾರ್ಯಗಳನ್ನು ಮಾಡಲು ಬಯಸುತ್ತೀರಿ ಎಂಬುದ್ನು Cortana ತಿಳಿದುಕೊಳ್ಳಬೇಕಾಗುತ್ತದೆ. ನೀವು ಕೀಬೋರ್ಡ್ ಬೇಡವೆಂದು ಬಯಸಿದರೆ, ನೀವು ಹೇಳುವುದು ಅಥವಾ ಬರೆಯುವುದನ್ನು ದಾಖಲೆಗಳು ಮತ್ತು ಪಠ್ಯ ಸಂದೇಶಗಳಾಗಿ ಪರಿವರ್ತಿಸಲು ಸಹಾಯ ಮಾಡುವುದಕ್ಕಾಗಿ ನಿಮ್ಮ ಮಾತು ಮತ್ತು ಕೈಬರಹದ ನಮೂನೆಗಳನ್ನು ನಾವು ಬಳಸಬಹುದು.

Microsoft Health, HealthVault ಮತ್ತು Microsoft Band ನಂತಹ ಸಾಧನಗಳು ನಿಮಗೆ ನಿಮ್ಮ ಆರೋಗ್ಯದ ಡೇಟಾವನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ಸಹಾಯ ಮಾಡಬಹುದು.
ನಿಮ್ಮ ಡೇಟಾವು ನಿಮ್ಮ ಹೃದಯದ ಬಡಿತದ ದರ ಮತ್ತು ನೀವು ನಡೆದ ದೈನಂದಿನ ಹೆಜ್ಜೆಗಳಂತಹ ನೈಜ-ಸಮಯದ ಡೇಟಾವನ್ನು ಒಳಗೊಂಡಿರಬಹುದು. ನೀವು ಆ ಡೇಟಾವನ್ನು ಸಂಗ್ರಹಿಸಲು HealthVault ಆರಿಸು ಬಯಸಿದರೆ ನಿಮ್ಮ ಆರೋಗ್ಯದ ದಾಖಲೆಗಳನ್ನು ಸಹ ನೀವು ಸೇರಿಸಿಕೊಳ್ಳಬಹುದು. ನಿಮ್ಮ ಆರೈಕೆದಾರರೊಂದಿಗೆ ಆರೋಗ್ಯದ ರೆಕಾರ್ಡ್ಗಳನ್ನು ಹಂಚಿಕೊಳ್ಳಲು ಸಹ ನಿಮ್ಮನ್ನು HealthVault ಸಕ್ರಿಯಗೊಳಿಸುತ್ತದೆ.

ಕೆಲವು Microsoft ಸೇವೆಗಳು ಜಾಹೀರಾತಿನಿಂದ ಬೆಂಬಲಿತವಾಗಿದೆ. ನೀವು ಹೆಚ್ಚು ಆಸಕ್ತಿಯುತವಾಗಿರುವ ಜಾಹೀರಾತುಗಳನ್ನು ನಿಮಗೆ ತೋರಿಸಲು, ನಿಮ್ಮ ಸ್ಥಾನ, Bing ವೆಬ್ ಶೋಧಗಳು, ನೀವು ವೀಕ್ಷಿಸುವ Microsoft ಅಥವಾ ಜಾಹೀರಾತುದಾರ ವೆಬ್ ಪುಟಗಳು, ಜನಸಂಖ್ಯೀಯ ಶಾಸ್ತ್ರ ಮತ್ತು ನೀವು ಮೆಚ್ಚಿನದಾಗಿಸಿರುವ ಸಂಗತಿಗಳಂತಹ ಡೇಟಾವನ್ನು ನಾವು ಬಳಸುತ್ತೇವೆ. ನಿಮಗೆ ಜಾಹೀರಾತುಗಳನ್ನು ಗುರಿಪಡಿಸಲು ನೀವು ಇಮೇಲ್, ಚಾಟ್, ವೀಡಿಯೋ ಕರೆಗಳು ಅಥವಾ ಧ್ವನಿ ಮೇಲ್ನಲ್ಲಿ ನೀವು ಹೇಳುವುದನ್ನು ಅಥವಾ ನಿಮ್ಮ ದಾಖಲೆಗಳು, ಫೋಟೋಗಳು ಅಥವಾ ಇತರ ವೈಯಕ್ತಿಕ ಫೈಲ್ಗಳನ್ನು ನಾವು ಬಳಸುವುದಿಲ್ಲ.
ನಿಮ್ಮ ಆಸಕ್ತಿಗಳನ್ನು ಆಧರಿಸಿದ ಜಾಹೀರಾತುಗಳನ್ನು ನಿಮಗೆ Microsoft ತೋರಿಸದಂತೆ ನಿಲ್ಲಿಸಲು, ಆನ್ಲೈನ್ನಲ್ಲಿನ ನಮ್ಮ ಜಾಹೀರಾತು ನಿಯಂತ್ರಣಗಳನ್ನು ಬಳಸಿ. ನೀವು ಇನ್ನೂ ಸಹ ಜಾಹೀರಾತುಗಳನ್ನು ನೋಡುತ್ತೀರಿ, ಆದರೆ ಅವುಗಳು ನಿಮಗೆ ಅಷ್ಟು ಆಸಕ್ತಿಕರವಾಗಿರದೇ ಇರಬಹುದು.

ನಿಮ್ಮ ಸ್ವಂತ Microsoft ಖಾತೆಗೆ ಸೈನ್ ಅಪ್ ಮಾಡುವುದರಿಂದ ನಿಮಗೆ ಸಂಗ್ರಹಣೆ ಮತ್ತು ಕುಟುಂಬ ಸೆಟ್ಟಿಂಗ್ಗಳಂತಹ ಆನ್ಲೈನ್ ಸೇವೆಗಳನ್ನು ಬಳಸಲು ನಿಮಗೆ ಅವಕಾಶ ನೀಡುತ್ತದೆ ಮತ್ತು ಸಾಧನಗಳಾದ್ಯಂತ ನಿಮ್ಮ ಸೆಟ್ಟಿಂಗ್ಗಳನ್ನು ಸಿಂಕ್ನಲ್ಲಿರಿಸಲು ಸಹಾಯ ಮಾಡುತ್ತದೆ. ನಿಮ್ಮ ಖಾತೆಗೆ ಪಾವತಿ ಡೇಟಾವನ್ನು ನೀವು ಸೇರಿಸಿದಾಗ, ಅಪ್ಲಿಗಳು, ಚಂದಾದಾರಿಕೆಗಳು, ಮೂವಿಗಳು, TV ಮತ್ತು ಆಟಗಳನ್ನು ನಿಮ್ಮ Windows 10 ಸಾಧನಗಳಲ್ಲಿ ಪಡೆದುಕೊಳ್ಳುವುದು ಸುಲಭವಾಗಿರುತ್ತದೆ.
ನಿಮ್ಮ ಪಾಸ್ವರ್ಡ್ ಅನ್ನು ರಹಸ್ಯವಾಗಿಡುವ ಮೂಲಕ ಮತ್ತು ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸದಂತಹ ಹೆಚ್ಚುವರಿ ಭದ್ರತೆ ಮಾಹಿತಿಯನ್ನು ಸೇರಿಸುವ ಮೂಲಕ, ನಿಮ್ಮ ಫೈಲ್ಗಳು, ಕ್ರೆಡಿಟ್ ಕಾರ್ಡ್ಗಳು, ಬ್ರೌಸಿಂಗ್ ಇತಿಹಾಸ ಮತ್ತು ಸ್ಥಳ ಮಾಹಿತಿಯನ್ನು ಹೆಚ್ಚು ಸುರಕ್ಷಿತವಾಗಿ ಮತ್ತು ಉತ್ತಮವಾಗಿ ಇರಿಸಿಕೊಳ್ಳಲು ನಿಮಗೆ ಸಹಾಯ ಮಾಡಬಹುದು.
ಪಾಸ್ವರ್ಡ್ಗಳು, ಭದ್ರತೆ ಮಾಹಿತಿ ಮತ್ತು ಪಾವತಿ ಆಯ್ಕೆಗಳನ್ನು ಪರಿಷ್ಕರಿಸಲು Microsoft ಖಾತೆ ವೆಬ್ಸೈಟ್ಗೆ ಭೇಟಿ ನೀಡಿ.

ಯಾವುದೇ ಆಧುನಿಕ ಸಾಧನದಿಂದ ನೀವು ನಿರೀಕ್ಷಿಸುವಂತೆಯೇ, ಹೆಚ್ಚಿನ Windows 10 ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು PC ಗಳು ಪ್ರಪಂಚವನ್ನು ಪತ್ತೆಹಚ್ಚಲು ಸಾಧನಕ್ಕೆ ಮಾರ್ಗಗಳಾಗಿರುವ ಸೆನ್ಸರ್ಗಳ ಜೊತೆಗೆ ಬರುತ್ತವೆ. ಅದು ನಿಮ್ಮ ಫೋನ್ನ ಮೈಕ್ರೋಫೋನ್ ಅಥವಾ ಆಕ್ಸೆಲೆರೇಟರ್, ನಿಮ್ಮ ಲ್ಯಾಪ್ಟಾಪ್ನ ಬೆರಳಚ್ಚು ಸ್ಕ್ಯಾನರ್, ಆಂತರಿಕ GPS ಸೆನ್ಸರ್ ಹಾಗೂ ಹೆಚ್ಚಿನವುಗಳಾಗಿರಬಹುದು.
Windows 10 ಸಾಧನಗಳಲ್ಲಿ, ಯಾವ ಸೆನ್ಸರ್ ಡೇಟಾವನ್ನು ಸಾಧನ ಮತ್ತು ಅಪ್ಲಿಗಳು ಸೆಟ್ಟಿಂಗ್ಗಳು > ಗೌಪ್ಯತೆಯಲ್ಲಿ ಬಳಸಬಹುದೆಂಬುದನ್ನು ನೀವು ನಿಯಂತ್ರಿಸುತ್ತೀರಿ.

ಕ್ಲೌಡ್-ಸಾಮರ್ಥ್ಯದ ಸೇವೆಯಾಗಿ Windows 10 ಜೊತೆಗೆ, ನಿಮ್ಮ ಅನುಭವವನ್ನು ನಿರಂತರವಾಗಿ ರಕ್ಷಿಸಲು ಮತ್ತು ಸುಧಾರಿಸಲು ಡೇಟಾ ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನಿಮ್ಮನ್ನು ಆನ್ಲೈನ್ನಲ್ಲಿ ಸುರಕ್ಷಿತವಾಗಿಡುವುದಕ್ಕಾಗಿ, ಅಜ್ಞಾತ ಮಾಲ್ವೇರ್ಗಾಗಿ ನಾವು Windows 10 ಸಾಧನಗಳನ್ನು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡುತ್ತೇವೆ. ನಿಮ್ಮ ಸಾಧನವು ಚೆನ್ನಾಗಿ ಚಲಾಯಿಸುತ್ತಿರುವುದಕ್ಕಾಗಿ, ನಿಮ್ಮ Windows 10 ಸಿಸ್ಟಂ ಹೇಗೆ ಕಾರ್ಯಾಚರಿಸುತ್ತಿದೆ ಎಂಬ ಕುರಿತಾಗಿ ನಾವು ಸ್ವೀಕರಿಸುವ ಪ್ರಸ್ತುತ ಮಾಹಿತಿಯಾದ ಟೆಲೆಮೆಟ್ರಿಯನ್ನೂ ಸಹ ನಾವು ಬಳಸುತ್ತೇವೆ. ನಿರ್ದಿಷ್ಟ ಪ್ರಕಾರದ ಪ್ರಿಂಟರ್ ಡ್ರೈವರ್ ಜೊತೆಗೆ ಸಮಸ್ಯೆ ಇದೆ ಎಂದು ನಮಗೆ ತಿಳಿದಿದ್ದರೆ, ನಾವು ಸೂಕ್ತ ಡ್ರೈವರ್ಗಳನ್ನು ಆ ಪ್ರಕಾರದ ಪ್ರಿಂಟರ್ ಬಳಸುತ್ತಿರುವ ಜನರಿಗೆ ಮಾತ್ರ ಕಳುಹಿಸಬಹುದು.
Windows 10 ನಲ್ಲಿ ವೈಯಕ್ತೀಕರಿಸಿದ ಸೇವೆಗಳು ಮತ್ತು ಅನುಭವಗಳನ್ನು ವಿತರಿಸಲು ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂಬ ಕುರಿತಾಗಿ ಸಾಕಷ್ಟು ನಿಯಂತ್ರಣಗಳನ್ನು ಸಹ ನಾವು ನಿಮಗೆ ಒದಗಿಸುತ್ತೇವೆ. ನೀವು ಯಾವುದೇ ಸಮಯದಲ್ಲಿ ಸೆಟ್ಟಿಂಗ್ಗಳು > ಗೌಪ್ಯತೆ > ಪ್ರತಿಕ್ರಿಯೆ ಮತ್ತು ತಪಾಸಣೆಗೆ ಹೋಗುವ ಮೂಲಕ ಮೂಲಭೂತ ಟೆಲಿಮೆಟ್ರಿಯಿಂದ ಹಿಡಿದು ವೈಯಕ್ತಿಕಗೊಳಿಸಿದ ಸೇವೆಗಳವರೆಗೆ ಪ್ರತಿಯೊಂದಕ್ಕೂ ನಿಮ್ಮ Windows 10 ಗೌಪ್ಯತೆ ಸೆಟ್ಟಿಂಗ್ಗಳನ್ನು ನೀವು ಸರಿಹೊಂದಿಸಬಹುದು.